*ಅರ್ಥಗಳಿಗೆ ಬರಹದ ಕೊನೆ ನೋಡಿ
ಅಚ್ಚ-ಕನ್ನಡ ಎಂದರೇನು?
ಅಚ್ಚ-ಕನ್ನಡ ಎಂದರೆ ಬರೀ ಕನ್ನಡದ್ದೇ ಒರೆಗಳನ್ನು ಹೊಂದಿರುವ ಕನ್ನಡ. ಅಂದರೆ ಈ ಕನ್ನಡದಲ್ಲಿ ಸಕ್ಕದ, ಪಾಗದ, ಇಂಗಲೀಸು, ಉರ್ದು, ಪೋರುಚುಗೀಸು, ಮರಾಟಿ, ಮುಂತಾದ ಹೊರನುಡಿಗಳ ಒರೆಗಳು ಇರುವುದಿಲ್ಲ. ಇದು ನೂರಕ್ಕೆ ನೂರರನಿತ್ತು ಕನ್ನಡದ್ದೇ ಆದ ಒರೆಗಳನ್ನು ಹೊಂದಿರುವಂತದ್ದು. ಕನ್ನಡದಲ್ಲಿ ಇರದ ಸರಕುಗಳಿಗೆ ಒರೆಗಳನ್ನು ಪಡೆಯುವಾಗ ಅಂತವನ್ನು ಕನ್ನಡಯಿಸಿ, ಅಂದರೆ ಕನ್ನಡದ ಸೊಗಡಿಗೆ ಹೊಂದುವಂತೆ ಮಾರ್ಪಡಿಸಿ ಬಳಸಲಾಗುವುದು. ಮಾದರಿ ಇಂಗ್ಲೀಶ್ => ಇಂಗಲೀಸು.
ಅಚ್ಚ-ಕನ್ನಡದ ಹಿರಿಮೆ
ಬಲು ಹಿಂದಿನ ಹೊತ್ತಿನಿಂದಲೂ ಈ ’ಅಚ್ಚ-ಕನ್ನಡ’ದ ಕಬ್ಬಗಳು ನೆಗೞು ನಡೆಯುತ್ತಿದ್ದವು, ಈಗಲೂ ಕೆಲವರು ನಡೆಸುತ್ತಿದ್ದಾರೆ. ಇದಕ್ಕೆ ಮಾದರಿಯಾಗಿ ಅಂಡಯ್ಯ(ಕಬ್ಬಿಗರ ಕಾವ), ನಯಸೇನರಂತೆ ಹಳೆಯ ಕಬ್ಬಿಗರೂ, ಮತ್ತೂ ಇಪ್ಪತ್ತನೇ ನೂರೇಡಲ್ಲಿ ಕೊಳಂಬೆ ಪುಟ್ಟಣ್ಣ ಗೌಡರು ಮುಂತಾದವರು ಇದಕ್ಕೆ ದುಡಿದವರು.
ಅಚ್ಚ-ಕನ್ನಡ ಏಕೆ ಕಾಣಿಸಲ್ಲ?
ಇಂದಿನ ಕನ್ನಡದಲ್ಲಿ ಹೇರಳವಾಗಿ ಸಕ್ಕದ ಮುಂತಾದ ಹೊರನುಡಿಗಳ ಒರೆಗಳು ಬರೆತು ಹೋಗಿದ್ದು, ಅಚ್ಚ-ಕನ್ನಡವನ್ನು ಓದಲುಮ ಬರೆಯಲು ಹಲವರಿಗೆ ಎಡೆರಿದೆ. ಕನ್ನಡಕ್ಕೆ ಸಕ್ಕದ, ಪಾಗದದ ಒರೆಗಳ ಬೆರಕೆ ಬಲು ಹಿಂದಿನಿಂದಲೂ ಆಗುತ್ತಾ ಬಂದಿದ್ದು, ಹಲವು ಸಕ್ಕದ, ಪಾಗದದ ಒರೆಗಳೂ ಕನ್ನಡದ್ದೇ ಎನ್ನುವ ಮಟ್ಟಿಗೆ ಬಳಕೆಯಲ್ಲಿವೆ. ಆದುದರಿಂದ ಹೆಚ್ಚೆಡೆ ನಾವು ಕಾಣುವ ಕನ್ನಡ ಅಪ್ಪಟವಲ್ಲ, ಅದು ಬೆರಕೆ.
ಅಚ್ಚ-ಕನ್ನಡ ಸೊಗಡು
ಅಚ್ಚ-ಕನ್ನಡದಲ್ಲಿ ಮೊದಲಲ್ಲೇ ಹೇಳಿದಂತೆ, ಬರೀ ಕನ್ನಡದ್ದೇ ಆದ ಒರೆಗಳ ಬಳಕೆ ಇರಬೇಕು. ಕನ್ನಡದಲ್ಲಿ ಒರೆ ಇರದಿದ್ದರೆ, ಆಗ ಕನ್ನಡಕ್ಕೆ ತರುವಾಗ ಅದನ್ನು ಕನ್ನಡಯಿಸಬೇಕು, ಅಂದರೆ ಕನ್ನಡದ ಸೊಗಡಿಗೆ ಹೊಂದಿಸಬೇಕು.
ಅಚ್ಚಕನ್ನಡದಲ್ಲಿ ಬರೀ ಕೆಳಗಿನ ಅಕ್ಕರಗಳು ಇವೆ
ಅ ಆ ಇ ಈ ಉ ಊ ಎ ಏ ಒ ಓ ಅಂ ( ಋ, ೠ, ಅಃ ಇಲ್ಲ, ಐ = ಅಯ್, ಔ = ಅವ್ )
ಕ ಗ
ಚ ಜ
ಟ ಡ ಣ
ತ ದ ನ
ಪ ಬ ಮ
(ಮಹಾಪ್ರಾಣಗಳಿಲ್ಲ)
ಯ ರ ಱ ಲ ವ ಸ ಹ ಳ ೞ
ಒಟ್ಟು ಮುವ್ವತ್ತಮೂರು ಅಕ್ಕರಗಳು.ೞ = ಳ( ಹತ್ತಿರದ ಸದ್ದು ) ( ಕುೞಿತು, ಕೊೞೆತು, ಹೞತು )
ಱ = ರ( ಹತ್ತಿರದ ಸದ್ದು ) ( ಕುಱಿತು, ಅಱಿತು )
ಮುಂದುವರಿಯುವುದು.....
ಕನ್ನಡ | ಹೊರನುಡಿ |
---|---|
ಒರೆ | ಶಬ್ದ, word |
ಸಕ್ಕದ | ಸಂಸ್ಕೃತ, Sanskrit |
ಪಾಗದ | ಪಾಕೃತ, Prakrit |
ಅನಿತ್ತು | ಅಷ್ಟು, that much |
ಸರಕು | ವಸ್ತು, thing |
ಕಬ್ಬ | ಸಾಹಿತ್ಯ, literature |
ಕಬ್ಬಿಗ | ಸಾಹಿತಿ, poet |
ನೂರೇಡು (ನೂರು ಏಡು) | ನೂರು ವರುಷ, ಶತಮಾನ, century |
ಹೇರಳ | ಅಧಿಕ, ಬಹು, ಅತಿ, great amount |
ಎಡರು | ಕಷ್ಟ, problem |
ನೆಗೞು, ನೆಗೞ್ಚು | ರಚನೆ, compose |
ಅಕ್ಕರ(ತದ್ಭವ) | ಅಕ್ಷರ |
2 comments:
olleya prayatna. Kannadavannu saraleekarana maadalu uttama prayatna. Aadare eegaagale iruva sansrita padagalannu chellabaradu. Itara bhasha shabdagalu kannadakke shaktiyannu, sattvavannu, impannu, kampannu hagu padasamruddhiyannu needive. Navoo saha Tamilara haage parishuddhateya bhramege tuttaguvudu beda. Kannadada Devige iruva aabharanagalalli yavudoo keelalla, yavudoo melalla.
Kannada nudu baalali, belagali, beleyali.
Sirigannadam Gelge.
ರ=ದಂತಮೂಲೀಯ ತಾಡಿತ (ನಾಲಿಗೆ ಹಲ್ಲಿನ ಬುಡಕ್ಕೆ ಹೊಡೆಯುತ್ತದೆ)
ಱ=ದಂತಮೂಲೀಯ ಕಂಪಿತ (ನಾಲಿಗೆ ಹಲ್ಲಿನ ಬುಡದಲ್ಲಿ ನಡುಗುತ್ತದೆ)
ಲ=ದಂತ್ಯ (ಉಚ್ಚಾರಸ್ಥಾನ ದಂತ್ಯ)
ೞ=ತಾಲವ್ಯ(ಉಚ್ಚಾರಸ್ಥಾನ ಅಂಗುಳು ಹಾಗೂ ಸ್ವಲ್ಪವೇ ನಾಲಿಗೆ ಸುರುಳಿಗೊಳ್ಳುತ್ತದೆ)
ಳ=ಮೂರ್ಧನ್ಯ (ಉಚ್ಚಾರಸ್ಥಾನ ನೆತ್ತಿ ನಾಲಿಗೆ ಹೆಚ್ಚಿನ ಮಟ್ಟದಲ್ಲಿ ಸುರುಳಿಗೊಳ್ಳುತ್ತದೆ)
Post a Comment